ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
25 ವರ್ಷಗಳು ಕಳೆದರೂ ಕಾಳಿಂಗ ನಾವಡ ಹೆಸರು ಸದಾ ಹಸಿರು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಒಕ್ಟೋಬರ್ 6 , 2015
ಒಕ್ಟೋಬರ್ 6, 2015

25 ವರ್ಷಗಳು ಕಳೆದರೂ ಕಾಳಿಂಗ ನಾವಡ ಹೆಸರು ಸದಾ ಹಸಿರು

ಕೋಟ : ಯಕ್ಷರಂಗದ ಧ್ರುವತಾರೆ ದಿ.ಕಾಳಿಂಗ ನಾವಡರು ನಿಧನರಾಗಿ 25 ವರ್ಷಗಳು ಸಂದರೂ ಅವರ ನೆನಪು ಇಂದಿಗೂ ಶಾಶ್ವತವಾಗಿ ಉಳಿದಿದೆ. ಕಾಳಿಂಗ ನಾವಡರ ಹಾಗೆ ಮತ್ತೊಬ್ಬ ಭಾಗವತರಿಲ್ಲ. 25 ಯುಗ ಕಳೆದರೂ ಕಾಳಿಂಗ ನಾವಡರು ಸದಾ ಪ್ರಸ್ತುತ ರಾಗಿಯೇ ಉಳಿಯುತ್ತಾರೆ ಎಂದು ಯಕ್ಷ ವಿದ್ವಾಂಸ, ನಾವಡರ ಆತ್ಮೀಯ ಸಹಪಾಠಿ ಗುಂಡ್ಮಿ ಸದಾನಂದ ಐತಾಳ್ ಹೇಳಿದರು.

ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ, ದಿ. ಕಾಳಿಂಗ ನಾವಡರ ಅಭಿಮಾನಿ ಬಳಗದ ಆಶ್ರಯದಲ್ಲಿ ಗುಂಡ್ಮಿ ಯಕ್ಷಗಾನ ಕಲಾ ಕೇಂದ್ರದ ಸದಾನಂದ ರಂಗಮಂಟಪದಲ್ಲಿ ಭಾನುವಾರ ನಡೆದ ಯಕ್ಷಗಾನದ ಗಾನ ಕೋಗಿಲೆ ದಿ. ಕಾಳಿಂಗ ನಾವಡರ ನೆನಪನ್ನು ಶಾಶ್ವತಗೊಳಿಸುವ ಸಂಸ್ಮರಣಾ ದಿನದ ಜತೆಗೆ ನೆನಪಿನ ಮೆಲುಕು ನಮ್ಮ ಕಾಳಿಂಗ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕಾಳಿಂಗ ನಾವಡರು 15ನೇ ವರ್ಷದಲ್ಲೇ ಮೇಳಕ್ಕೆ ಸೇರುವುದರ ಮೂಲಕ ಯಾರೂ ಮಾಡದ ಸಾಧನೆಯನ್ನು ಮಾಡಿದವರಾಗಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸಕ್ಕಷ್ಟೆ ಸೀಮಿತ ವಾದ ನಾವಡರು ಯಕ್ಷಗಾನದ ಭಾಗವತಿಕೆಯಲ್ಲಿ ಒಂದಷ್ಟು ಸಾಧನೆ ಮಾಡಿ, ಬೇಗನೆ ಪ್ರಸಿದ್ಧಿಗೆ ಬಂದು ಬೇಗನೆ ನಮ್ಮಿಂದ ಮರೆಯಾದರು ಎಂದರು.

ಕಾರಂತರ ಆತ್ಮೀಯ ಒಡನಾಡಿ ಯಡಬೆಟ್ಟು ವೆಂಕಪ್ಪಯ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷಗಾನ ಕಲಾ ಕೇಂದ್ರ ದ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಾವಡರ ಸಹೋದರ ಗಣಪಯ್ಯ ನಾವಡ ಕಾಳಿಂಗ ನಾವಡರ ಬಗ್ಗೆ ಮನ ತುಂಬಿ ಮಾತುಗಳನ್ನಾಡಿದರು.

ಕಾಳಿಂಗ ನಾವಡರ ಅಭಿಮಾನಿ ಬಳಗದ ಸ್ವಾಗತ ಸಮಿತಿಯ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ ಸ್ವಾಗತಿಸಿದರು. ನಾವಡರ ಸಹವರ್ತಿ, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪ್ರಾಸ್ತಾವನೆಗೈದರು. ವೈಕುಂಠ ಹೇರ್ಳೆ, ಸೀತಾರಾಮ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು.

ನಾವಡರ ಶೈಲಿ ಉಪ್ಪೂರು ಶೈಲಿ!

ಕಾಳಿಂಗ ನಾವಡರ ಭಾಗವತಿಕೆಯಲ್ಲಿ ದಿ. ರಾಮಚಂದ್ರ ನಾವಡ, ದಿ. ನಾರಾಣಪ್ಪ ಉಪ್ಪೂರ ಶೈಲಿಯ ಸಾಮ್ಯತೆಗಳ ಕುರಿತು ನಡೆದ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ಮಹಾಭಾರತದ ಪ್ರಸಂಗದ ಪದ್ಯಗಳನ್ನು ಆಯ್ಕೆ ಮಾಡಿಕೊಂಡ ಬಗ್ಗೆ ವಿವರಿಸಿ ಕಲಾವಿದರನ್ನು ಪರಿಚಯಿಸಿದರು. ಕೆ.ಪಿ. ಹೆಗಡೆ, ಸುಬ್ರಹ್ಮಣ್ಯ ಐತಾಳ್, ರವೀಂದ್ರಕೃಷ್ಣ ಭಟ್, ಶ್ರೀಧರ ಹಡಗ, ಉಮೇಶ್ ಸುವರ್ಣ, ಚಂದ್ರಕಾಂತ ಮೂಡುಬೆಳ್ವೆ, ಉದಯ ಕುಮಾರ್ ಹೊಸಾಳ, ಕೆ.ಜೆ. ಕೃಷ್ಣ ಮೊದಲಾದವರು ಸಹಕರಿಸಿದರು. ಬ್ರಹ್ಮಾವರ ಸುದೇಶ್ ಶೆಟ್ಟಿ ದಿ.ಕಾಳಿಂಗ ನಾವಡರ ಸಾಕ್ಷ್ಯಚಿತ್ರ ಪ್ರದರ್ಶಿಸಿದರು. ತದನಂತರ ದಿ. ಕಾಳಿಂಗ ನಾವಡರ ಶೈಲಿ ಮತ್ತು ನೆಲೆಗಟ್ಟನ್ನು ಪ್ರಸಿದ್ಧ ಭಾಗವತರುಗಳು ಸಮ್ಮಿಲನದಲ್ಲಿ ಏರ್ಪಡಿಸಲಾಯಿತು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನೋಹರ ಎಸ್. ಕುಂದರ್ ಅವರ ಅಪೂರ್ವ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಕೃಪೆ : vijaykarnataka


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ